ದುಷ್ಟತನದ ಮೇಲೆ ಯೇಸುವಿನ ಅಧಿಕಾರ
ಉದ್ದೇಶ: ಯೇಸುವಿಗೆ ದುಷ್ಟತನದ ಮೇಲೆ ಅಧಿಕಾರವಿದೆಯೆಂದೂ, ತನ್ನ ಹಿಂಬಾಲಕರು ಸಹ ದುಷ್ಟತನವನ್ನು ಜಯಿಸುವಂತೆ ಆತನು ಶಕ್ತಿ ಕೊಡುತ್ತಾನೆಂದೂ ಮಕ್ಕಳಿಗೆ ಕಲಿಸುವುದು. ಯೇಸುವಿನ ಹೆಸರಿನಲ್ಲಿ ಮತ್ತು ಶಕ್ತಿಯಲ್ಲಿ ನಾವು ದುಷ್ಟತನವನ್ನು ಸೋಲಿಸಬಹುದು.
ವೇದ ವಾಚನ: ಮಾರ್ಕ 9:14-29
ನೆನಪಿನ ವಚನ: ಮಾರ್ಕ 9:23 – “ನಂಬುವವನಿಗೆ ಎಲ್ಲವೂ ಸಾಧ್ಯ.”
ಪಾಠವನ್ನು ನೀಡುವುದು
ಆರಂಭದ ಹಂತ
ನಿಮಗೆ ಮಾಡಲು ಬಹಳ ಕಷ್ಟವಾದ ಕೆಲವು ಸಂಗತಿಗಳನ್ನು ಯೋಚಿಸಿರಿ. ಉದಾಹರಣೆಗಳು: ಶಾಲಾ ಶುಲ್ಕ ಕಟ್ಟಲು ಹಣ ಹೊಂದಿಸುವುದು, ಸ್ನೇಹಿತರೊಂದಿಗೆ ಅಥವಾ ಕುಟುಂಬದವರೊಂದಿಗೆ ಕರ್ತನಾದ ಯೇಸುವಿನ ಬಗ್ಗೆ ಮಾತನಾಡುವುದು. ನಿಮ್ಮ ಸ್ವಂತ ಅನುಭವದಿಂದಲೂ ಕೆಲವು ಉದಾಹರಣೆಗಳನ್ನು ಕೊಡಿರಿ.
ಪಾಠದ ಮುಖ್ಯ ಅಂಶಗಳು
1. ಇಂದಿನ ಕಥೆ ಬಹಳ ದೊಡ್ಡ ಸಮಸ್ಯೆಯಿದ್ದ ಒಬ್ಬ ಮನುಷ್ಯನ ಬಗ್ಗೆ. ಅವನ ಮಗ ತುಂಬ ಅಸ್ವಸ್ಥನಾಗಿದ್ದನು, ಯಾರಿಂದಲೂ ಅವನನ್ನು ಗುಣಪಡಿಸಲಾಗಲಿಲ್ಲ.
2. ಮಗನ ಕಾಯಿಲೆಯನ್ನು ವಿವರಿಸಿರಿ. ದುರಾತ್ಮದ ಹಿಡಿತದಲ್ಲಿದ್ದ ಹುಡುಗನನ್ನು ನೋಡುವುದು ಹೃದಯ ಒಡೆಯುವಂತಹ, ಬಹಳ ಭಯಾನಕವಾದ ಸಂಗತಿಯಾಗಿದ್ದಿರಬೇಕು (ಮಾರ್ಕ 9:17-18ಎ).
3. ತಂದೆ ಮೊದಲು ಯೇಸುವಿನ ಶಿಷ್ಯರ ಬಳಿ ಸಹಾಯಕ್ಕಾಗಿ ಹೋದನು. ಅವರಿಂದ ಏನೂ ಮಾಡಲಾಗಲಿಲ್ಲ (9:18ಬಿ).
4. ಹುಡುಗನು ಯೇಸುವಿನ ಹತ್ತಿರ ಬಂದಾಗ ದುರಾತ್ಮವು ಆತನನ್ನು ದೇವರ ಮಗನೆಂದು ಗುರುತಿಸಿ ಹುಡುಗನನ್ನು ಬಹಳ ಕ್ರೂರವಾಗಿ ನಡೆಸಿಕೊಂಡಿತು (9:20). ಯೇಸುವಿನ ಪ್ರಶ್ನೆಗಳು ಹುಡುಗನ ಬಗ್ಗೆ ಆತನಿಗಿದ್ದ ಕಾಳಜಿಯನ್ನು ತೋರಿಸಿದವು. ಯೇಸುವಿನಿಂದಲೂ ಸಹಾಯವಾಗುವುದೆಂದು ತಂದೆಗೆ ಹೆಚ್ಚು ಆಶೆ ಇರಲಿಲ್ಲ. ಆದರೂ ತಮಗೆ ಯಾರಾದರೂ ಸಹಾಯ ಮಾಡಬಲ್ಲರೆಂದರೆ ಅದು ಯೇಸುವೇ ಎಂದು ಅವನು ನಂಬಿದನು (9:21-22). ಚಿತ್ರ 24ನ್ನು ತೋರಿಸಿರಿ. ಯೇಸು ಅವನಿಗೆ, “ನಂಬುವವನಿಗೆ ಎಲ್ಲವೂ ಸಾಧ್ಯ” ಎಂದನು (9:23).
5. ತಕ್ಷಣ ತಂದೆ ತನ್ನ ಮಗನಿಗೆ ಸಹಾಯ ಮಾಡಬೇಕೆಂದು ಯೇಸುವನ್ನು ಬೇಡಿಕೊಂಡನು. ಏನಾಗುತ್ತದೆಂದು ನೋಡಲು ಜನಸಮೂಹ ಓಡಿ ಬಂತು. ಮಗು ಸತ್ತೇ ಹೋಯಿತೆಂದು ಎಲ್ಲರೂ ಭಾವಿಸಿದಾಗ ಯೇಸು ಹುಡುಗನನ್ನು ಗುಣಪಡಿಸಿದನು (9:24-27).
6. ನಂತರ, ತಮ್ಮಿಂದ ಹುಡುಗನನ್ನು ಗುಣಪಡಿಸಲು ಏಕೆ ಆಗಲಿಲ್ಲವೆಂದು ಯೇಸುವಿನ ಶಿಷ್ಯರು ಆತನನ್ನು ಕೇಳಿದರು. ಪ್ರಾರ್ಥನೆಯ ಶಕ್ತಿಯನ್ನು ಬಳಸಲು ಕಲಿಯಬೇಕೆಂದು ಯೇಸು ಅವರಿಗೆ ಹೇಳಿದನು (9:28-29).
ನೆನಪಿನ ವಚನವನ್ನು ಮನದಲ್ಲಿ ಅಚ್ಚೊತ್ತುವುದು
ಕಥೆಗೆ ನಮ್ಮ ಪ್ರತಿಕ್ರಿಯೆ
ಯೇಸು ಎಲ್ಲಾ ದುಷ್ಟತನವನ್ನು ಜಯಿಸಿದ್ದಾನೆ. ನಾವು ಪ್ರಾರ್ಥಿಸಿದಾಗ ನಾವೂ ಅದನ್ನು ಜಯಿಸುವ ಶಕ್ತಿಯನ್ನು ಆತನು ಕೊಡುತ್ತಾನೆ. ಇಂದಿನ ನೆನಪಿನ ವಚನದಲ್ಲಿ ಅದ್ಭುತವಾದ ವಾಗ್ದಾನವಿದೆ. ಆದರೆ ನಾವು ಜವಾಬ್ದಾರಿಯಿಲ್ಲದೆ ಅಥವಾ ಸ್ವಾರ್ಥದಿಂದ ಪ್ರಾರ್ಥಿಸಬಹುದು ಎಂದು ಇದರ ಅರ್ಥವಲ್ಲ. ಪ್ರಾರ್ಥನೆಯ ಶಕ್ತಿಯನ್ನು ದೇವರ ಚಿತ್ತಕ್ಕೆ ಅನುಸಾರವಾಗಿ ಬಳಸಬೇಕು (1 ಯೋಹಾನ 5:14).
Copyright © Global Recordings Network. Used by permission.
ಪಾಠ - 24: ದುಷ್ಟತನದ ಮೇಲೆ ಯೇಸುವಿನ ಅಧಿಕಾರ
ಬೈಬಲ್ ವಾಚನ: ಮಾರ್ಕ 9:14-29
1. ನಾನು ಯಾರು?
ಉತ್ತರ ಬರೆಯಿರಿ:
ನನ್ನ ಅಸ್ವಸ್ಥ ಮಗನಿಗೆ ಸಹಾಯ ಮಾಡಬೇಕೆಂದು ಯೇಸುವನ್ನು ಕೇಳಿದೆ. ನಾನು ಯಾರು? __________ 👉 ಹುಡುಗನ ತಂದೆ
ನಮ್ಮಿಂದ ಹುಡುಗನನ್ನು ಗುಣಪಡಿಸಲಾಗಲಿಲ್ಲ; ಏಕೆಂದು ಯೇಸುವನ್ನು ಕೇಳಿದೆವು. ನಾವು ಯಾರು? __________ 👉 ಶಿಷ್ಯರು
ಎಲ್ಲಾ ದುಷ್ಟತನದ ಮೇಲೆ ನನಗೆ ಅಧಿಕಾರವಿದೆ. ನಾನು ಯಾರು? __________ 👉 ಯೇಸು
2. ಸರಿಯಾದ ಉತ್ತರ ಆರಿಸಿ
ಅ), ಆ) ಅಥವಾ ಇ) ಸುತ್ತ ವೃತ್ತ ಹಾಕಿ:
ಹುಡುಗನಿಗೆ ಮೊದಲು ಸಹಾಯ ಮಾಡಲು ಪ್ರಯತ್ನಿಸಿದವರು ಯಾರು?
ಅ) ಶಿಷ್ಯರು ಆ) ಪೇತ್ರ ಇ) ಅರಸ 👉 ಅ) ಶಿಷ್ಯರುಯೇಸು ಯಾವುದು ಸಾಧ್ಯ ಎಂದನು?
ಅ) ಏನೂ ಇಲ್ಲ ಆ) ನಂಬುವವನಿಗೆ ಎಲ್ಲವೂ ಇ) ಚಿಕ್ಕ ಸಂಗತಿಗಳು ಮಾತ್ರ 👉 ಆ) ನಂಬುವವನಿಗೆ ಎಲ್ಲವೂಶಿಷ್ಯರಿಗೆ ಏನು ಬೇಕೆಂದು ಯೇಸು ಹೇಳಿದನು?
ಅ) ಹಣ ಆ) ಪ್ರಾರ್ಥನೆ ಇ) ಆಹಾರ 👉 ಆ) ಪ್ರಾರ್ಥನೆ
3. ನಂಬಿಕೆಯೋ? ಸಂದೇಹವೋ?
ನಂಬಿಕೆಗೆ ನಂ, ಸಂದೇಹಕ್ಕೆ ಸಂ ಎಂದು ಬರೆಯಿರಿ:
ಯೇಸು ಬಲಿಷ್ಠ, ಆದ್ದರಿಂದ ಆತನ ಸಹಾಯ ಕೇಳುತ್ತೇನೆ. ( ___ ) 👉 ನಂ
ನನ್ನ ಪ್ರಾರ್ಥನೆಗಳಿಗೆ ಬೆಲೆಯಿಲ್ಲ ಎನ್ನಿಸುತ್ತದೆ. ( ___ ) 👉 ಸಂ
ಯೇಸು ಏನು ಬೇಕಾದರೂ ಮಾಡಬಲ್ಲನೆಂದು ನಂಬುತ್ತೇನೆ. ( ___ ) 👉 ನಂ
4. ಚರ್ಚೆಯ ಪ್ರಶ್ನೆಗಳು
ತಂದೆ ಯೇಸುವಿಗೆ ಏನು ಹೇಳಿದನು?
ಮಾದರಿ ಉತ್ತರ: “ನಂಬುತ್ತೇನೆ; ನನ್ನ ಅಪನಂಬಿಕೆಗೆ ಸಹಾಯ ಮಾಡು!”
ಯೇಸು ಹುಡುಗನನ್ನು ಏಕೆ ಗುಣಪಡಿಸಬಲ್ಲನು?
ಮಾದರಿ ಉತ್ತರ: ಎಲ್ಲಾ ದುಷ್ಟತನದ ಮೇಲೆ ಆತನಿಗೆ ಅಧಿಕಾರವಿದೆ.
ದೇವರ ಸಹಾಯವನ್ನು ನಾವು ಹೇಗೆ ಪಡೆಯಬಹುದು?
ಮಾದರಿ ಉತ್ತರ: ಪ್ರಾರ್ಥಿಸಿ ಯೇಸುವನ್ನು ನಂಬುವ ಮೂಲಕ.
5. ಕಂಠಪಾಠ ವಚನ:
ಮಾರ್ಕ 9:23 — “ನಂಬುವವನಿಗೆ ಎಲ್ಲವೂ ಸಾಧ್ಯ.”
ಫಿಲಿಪ್ಪಿ 4:13 — “ನನ್ನನ್ನು ಬಲಪಡಿಸುವಾತನ ಮೂಲಕ ನಾನು ಎಲ್ಲವನ್ನೂ ಮಾಡಬಲ್ಲೆನು.”
6. ಚಿತ್ರಕ್ಕೆ ಬಣ್ಣ ಹಚ್ಚಿರಿ:
If the workbook does not display on your device, use the Download PDF button above.
ಕರಕುಶಲ 1: ಶಕ್ತಿಯ ಗುರಾಣಿ
ಬೇಕಾದ ಸಾಮಗ್ರಿಗಳು: ರಟ್ಟು, ಬೆಳ್ಳಿ ಕಾಗದ, ಬಣ್ಣದ ಕಡ್ಡಿಗಳು, ಅಂಟು
ವಿಧಾನ:
ರಟ್ಟಿನಿಂದ ಗುರಾಣಿ ಆಕಾರ ಕತ್ತರಿಸಿ.
ಅದನ್ನು ಬೆಳ್ಳಿ ಕಾಗದದಿಂದ ಮುಚ್ಚಿ.
ಮಧ್ಯದಲ್ಲಿ ಶಿಲುಬೆ ಬರೆದು ಬರೆಯಿರಿ: “ಯೇಸು ಹೆಚ್ಚು ಬಲಿಷ್ಠ.”
ಪಾಠದ ಮುಖ್ಯ ಅಂಶ: ದುಷ್ಟತನದ ಮೇಲೆ ಯೇಸು ನಮಗೆ ಶಕ್ತಿ ಕೊಡುತ್ತಾನೆ.
ಕರಕುಶಲ 2: ಪ್ರಾರ್ಥನೆಯ ಕೈಗಳ ಕಾರ್ಡ್
ಬೇಕಾದ ಸಾಮಗ್ರಿಗಳು: ರಟ್ಟು, ಬಣ್ಣದ ಕಡ್ಡಿಗಳು
ವಿಧಾನ:
ಕಾರ್ಡನ್ನು ಅರ್ಧಕ್ಕೆ ಮಡಚಿ.
ಮುಂದೆ ಪ್ರಾರ್ಥಿಸುವ ಕೈಗಳನ್ನು ಬರೆಯಿರಿ.
ಒಳಗೆ ಬರೆಯಿರಿ: “ಎಲ್ಲವೂ ಸಾಧ್ಯ.”
ಪಾಠದ ಮುಖ್ಯ ಅಂಶ: ಯೇಸುವಿನ ಸಹಾಯ ಕೇಳುವ ಮಾರ್ಗವೇ ಪ್ರಾರ್ಥನೆ.
ಆಟ 1: ನಂಬಿರಿ!
ಆಡುವ ವಿಧಾನ:
ಶಿಕ್ಷಕರು ಯೇಸುವಿನ ಬಗ್ಗೆ ಸರಿಯಾದ ಅಥವಾ ತಪ್ಪಾದ ಹೇಳಿಕೆ ಹೇಳಲಿ.
ಸರಿಯಾದರೆ ಮಕ್ಕಳು ಎದ್ದು ನಿಲ್ಲಲಿ, ತಪ್ಪಾದರೆ ಕುಳಿತುಕೊಳ್ಳಲಿ.
ಸರಿಯಾಗಿ ಉತ್ತರಿಸಿದವರನ್ನು ಪ್ರಶಂಸಿಸಿ.
ಪಾಠದ ಮುಖ್ಯ ಅಂಶ: ನಾವು ಯೇಸುವಿನ ವಾಗ್ದಾನಗಳನ್ನು ನಂಬುತ್ತೇವೆ.
ಆಟ 2: ನಂಬಲು ಸಹಾಯ ಮಾಡು
ಆಡುವ ವಿಧಾನ:
ವೃತ್ತದಲ್ಲಿ ಕುಳಿತುಕೊಳ್ಳಿ.
ಪ್ರತಿ ಮಗು ಪೂರ್ಣಗೊಳಿಸಲಿ: “ಯೇಸುವೇ, ನಾನು ನಂಬಲು ಸಹಾಯ ಮಾಡು ...”
ಒಟ್ಟಿಗೆ ಚಿಕ್ಕ ಪ್ರಾರ್ಥನೆಯೊಂದಿಗೆ ಮುಗಿಸಿ.
ಪಾಠದ ಮುಖ್ಯ ಅಂಶ: ನಾವು ನಂಬಿಕೆಯಿಂದ ಕೇಳಿದಾಗ ಯೇಸು ಸಹಾಯ ಮಾಡುತ್ತಾನೆ.
