ನಾಮಾನನಿಗೆ ಗುಣವಾಗುತ್ತದೆ
ಉದ್ದೇಶ: ನಾಮಾನನು ತನ್ನ ಸ್ವಂತ ಸಾಮರ್ಥ್ಯ ಮತ್ತು ಸಂಪತ್ತಿನಲ್ಲಿದ್ದ ಭರವಸವನ್ನು ಬಿಟ್ಟಾಗ ಮಾತ್ರ ದೇವರು ಅವನನ್ನು ಗುಣಪಡಿಸಿದನು ಎಂದು ಮಕ್ಕಳಿಗೆ ತೋರಿಸುವುದು. ನಾವು ದೀನರಾದಾಗ ದೇವರು ನಮ್ಮನ್ನು ಆಶೀರ್ವದಿಸುತ್ತಾನೆ, ಏಕೆಂದರೆ ಆಗ ನಾವು ನಮ್ಮ ಮೇಲೆ ಅಲ್ಲ, ಆತನ ಮೇಲೆ ಅವಲಂಬಿಸುತ್ತೇವೆ.
ವೇದ ವಾಚನ: 2 ಅರಸುಗಳು 5:13-16. ಇಂದಿನ ವಾಚನದ ಹಿನ್ನೆಲೆಯನ್ನು ನೆನಪಿಸಲು 1-12 ವಚನಗಳನ್ನೂ ಓದಿ.
ನೆನಪಿನ ವಚನ: ವಿಮೋಚನಕಾಂಡ 20:1-2 (ಹತ್ತು ಆಜ್ಞೆಗಳು) – “ಆಗ ದೇವರು ಈ ಎಲ್ಲಾ ಮಾತುಗಳನ್ನು ಹೇಳಿದನು: ‘ದಾಸತ್ವದ ಮನೆಯಾದ ಐಗುಪ್ತದೇಶದೊಳಗಿಂದ ನಿನ್ನನ್ನು ಬರಮಾಡಿದ ನಿನ್ನ ದೇವರಾದ ಯೆಹೋವನು ನಾನೇ.’”
ಕಳೆದ ವಾರದ ನೆನಪಿನ ವಚನವನ್ನು ಪುನರಾವರ್ತಿಸಿ, ಈ ವಾರ 2ನೆಯ ವಚನವನ್ನು ಪೂರ್ಣಗೊಳಿಸಿ.
ಪಾಠವನ್ನು ಮಂಡಿಸುವುದು
ಆರಂಭದ ಹಂತ
ತರಗತಿ ಆರಂಭವಾಗುವ ಮೊದಲು, ಒಂದು ಚಿಕ್ಕ ನಾಟಕ ಮಾಡಲು ಮೂವರನ್ನು (ಮಕ್ಕಳು ಅಥವಾ ದೊಡ್ಡವರು) ಏರ್ಪಡಿಸಿ. ಇಬ್ಬರು ಜಗಳವಾಡುತ್ತಿರುವಾಗ ಮೂರನೆಯವನು ಸಮಸ್ಯೆಯನ್ನು ಬಗೆಹರಿಸುವ ಸಲಹೆಯೊಂದಿಗೆ ಬರುತ್ತಾನೆ. ಉದಾಹರಣೆಗೆ, ನೆರೆಯವರ ತೋಟಕ್ಕೆ ಒದ್ದು ಹೋದ ಚೆಂಡಿನ ಬಗ್ಗೆ ಆಗಬಹುದು. ಇಬ್ಬರೂ ಚೆಂಡನ್ನು ತರಲು ತಾವು ಹೋಗಬಾರದೇಕೆ ಎಂದು ನೆಪ ಹೇಳುತ್ತಾರೆ. ಮೂರನೆಯವನು ಅವರಿಬ್ಬರೂ ಒಟ್ಟಿಗೆ ಹೋಗಿ ನೆರೆಯವರಲ್ಲಿ ಕ್ಷಮೆ ಕೇಳುವಂತೆ ಒಪ್ಪಿಸುತ್ತಾನೆ.
ಪಾಠದ ಮುಖ್ಯ ಅಂಶಗಳು
1. ಅರಾಮ್ಯ ಸೈನ್ಯದ ಸೇನಾಪತಿ ನಾಮಾನನು ತನ್ನ ಅಹಂಕಾರದಿಂದಾಗಿ ತನ್ನ ಕುಷ್ಠರೋಗವನ್ನು ಗುಣಪಡಿಸುವ ಪ್ರವಾದಿ ಎಲೀಷನ ಸೂಚನೆಗಳನ್ನು ಪಾಲಿಸಲು ನಿರಾಕರಿಸಿದನು. ಸಂಕೀರ್ಣ ಚಿಕಿತ್ಸೆಗೆ ಹಣ ಕೊಡಬಲ್ಲ ಯಶಸ್ವೀ ಸೈನಿಕನಾದ ತಾನು ಕೆಸರಾದ ಚಿಕ್ಕ ಯೊರ್ದನ್ ನದಿಯಲ್ಲಿ ಸ್ನಾನ ಮಾಡಲು ಏಕೆ ಹೋಗಬೇಕು? ನಾಮಾನನ ಅದೃಷ್ಟವೆಂದರೆ ಅವನ ಸೇವಕರು ತಮ್ಮ ಯಜಮಾನನಿಗಿಂತ ಬುದ್ಧಿವಂತರೂ ದೀನರೂ ಆಗಿದ್ದರು. ಪ್ರವಾದಿಯ ಸೂಚನೆಗಳನ್ನು ಪಾಲಿಸುವಂತೆ ಅವರು ಅವನನ್ನು ಒಪ್ಪಿಸಿದರು (2 ಅರ 5:10-13).
2. ನಾಮಾನನು ಯೊರ್ದನಿನಲ್ಲಿ ಸ್ನಾನ ಮಾಡಿದ ಕತೆಯನ್ನು ಹೇಳುವಾಗ, ತರಗತಿಯ ಪ್ರತಿಯೊಬ್ಬರೂ ನಾಮಾನನಂತೆ ನಟಿಸಿ ಅಭಿನಯಿಸಬಹುದು. ಏಳನೆಯ ಸ್ನಾನದ ನಂತರ ನಾಮಾನನ ಕುಷ್ಠರೋಗ ಹೋಯಿತು (5:14). ಚಿತ್ರ 2 ತೋರಿಸಿ, ಎಲ್ಲರ ಮುಖದಲ್ಲಿರುವ ಸಂತೋಷವನ್ನು ಗಮನಿಸಲು ಹೇಳಿ.
3. ನಾಮಾನನು ತನ್ನ ಅಹಂಕಾರ ಮತ್ತು ಮಹತ್ವವನ್ನೆಲ್ಲಾ ಮರೆತನು. ಒಬ್ಬನೇ ದೇವರಿದ್ದಾನೆ, ಎಲೀಷನು ಸೇವೆ ಮಾಡುವ ದೇವರೇ ಅವನು ಎಂದು ಅವನು ಕಂಡುಕೊಂಡನು. ಉಪಕಾರ ಹೇಳಲು ಎಲೀಷನಿಗೆ ಕೊಡುಗೆ ಕೊಡಲು ಅವನು ಬಯಸಿದನು, ಆದರೆ ಎಲೀಷನು ಏನನ್ನೂ ಸ್ವೀಕರಿಸಲಿಲ್ಲ. ನಾಮಾನನು ಎರಡು ವಿಷಯಗಳನ್ನು ಅರ್ಥಮಾಡಿಕೊಳ್ಳಬೇಕೆಂದು ಎಲೀಷನು ಬಯಸಿದನು. ಒಂದು, ಗುಣವು ದೇವರ ಉಚಿತ ಕೊಡುಗೆಯಾಗಿತ್ತು; ನಾಮಾನನು ಅದಕ್ಕೆ ಅರ್ಹನಾಗಿರಲಿಲ್ಲ ಮತ್ತು ಯಾವ ರೀತಿಯಲ್ಲೂ ಅದಕ್ಕೆ ಬೆಲೆ ಕೊಡಲು ಸಾಧ್ಯವಿರಲಿಲ್ಲ. ಎರಡು, ಅದ್ಭುತವನ್ನು ಮಾಡಿದ್ದು ದೇವರ ಶಕ್ತಿ, ಎಲೀಷನದಲ್ಲ. ಆದ್ದರಿಂದ ಎಲೀಷನು ಅದಕ್ಕಾಗಿ ಹೊಗಳಿಕೆಯನ್ನಾಗಲಿ ಹಣವನ್ನಾಗಲಿ ಸ್ವೀಕರಿಸಲಾರನು (5:15-16).
4. ಸಮಯವಿದ್ದರೆ: ಎಲೀಷನ ಸೇವಕ ಗೇಹಜಿಯ ಕತೆಯನ್ನು ಹೇಳಿ; ಅವನು ಆ ಸಂಪತ್ತನ್ನು ನೋಡಿ ಆಸೆ ಹತ್ತಿಸಿಕೊಂಡು ಅದನ್ನು ಪಡೆಯಲು ಯೋಜನೆ ಮಾಡಿದನು (5:19-27). ಅವನ ಮೋಸ ಅವನಿಗೆ ಯಾವ ಆಶೀರ್ವಾದವನ್ನೂ ತರಲಿಲ್ಲ. ಬದಲಾಗಿ ಅವನು ಶಾಪಗ್ರಸ್ತನಾದನು; ಅವನಿಗೇ ಕುಷ್ಠರೋಗ ಬಂದಿತು.
ಕತೆಗೆ ನಮ್ಮ ಪ್ರತಿಕ್ರಿಯೆ
ಜನರು ಯಾವ ಯಾವ ವಿಷಯಗಳಲ್ಲಿ ಭರವಸ ಇಡುತ್ತಾರೆ ಎಂದು ಯೋಚಿಸಿ. ಕೆಲವು ಉದಾಹರಣೆಗಳು: ಹಣ, ಆಸ್ತಿ, ಸ್ಥಿರ ಕೆಲಸ, ಒಳ್ಳೆಯ ವಿದ್ಯಾಭ್ಯಾಸ. ಇವೆಲ್ಲಾ ಒಳ್ಳೆಯವೇ, ಆದರೆ ನಾಮಾನನಂತೆ ಅವು ದೇವರ ಕೊಡುಗೆಗಳು ಎಂದು ನಾವು ನೆನಪಿಡಬೇಕು. ಎಲೀಷನು ಸೇವೆ ಮಾಡುವ ದೇವರಿಂದ ಗುಣವಾದ ನಂತರ ನಾಮಾನನು ತನ್ನ ಬಗ್ಗೆಯೇ ತುಂಬಿಕೊಂಡಿರಲಿಲ್ಲ. ಅವನು ದೇವರನ್ನು ಆರಾಧಿಸಲು ಮತ್ತು ದೇವರೊಬ್ಬನಲ್ಲೇ ಭರವಸ ಇಡಲು ಬಯಸಿದನು. ಇದು ನಾವು ಅನುಸರಿಸುವುದು ಒಳ್ಳೆಯದಾದ ಮಾದರಿ.
ನೆನಪಿನ ವಚನವನ್ನು ಮನದಲ್ಲಿ ಬೇರೂರಿಸಿ
ಇದು ದೇವರ ಶಕ್ತಿ ಕಾರ್ಯ ಮಾಡುವುದಕ್ಕೆ ಇನ್ನೊಂದು ಉದಾಹರಣೆ ನಮಗೆ ಕೊಡುತ್ತದೆ.
ಇದುವರೆಗೆ ಕಲಿತ ವಿಮೋಚನಕಾಂಡ 20ರ ವಚನಗಳನ್ನು ಪುನರಾವರ್ತಿಸಿ.
ವಿಮೋಚನಕಾಂಡ 20:1-2 – “ಆಗ ದೇವರು ಈ ಎಲ್ಲಾ ಮಾತುಗಳನ್ನು ಹೇಳಿದನು: ‘ದಾಸತ್ವದ ಮನೆಯಾದ ಐಗುಪ್ತದೇಶದೊಳಗಿಂದ ನಿನ್ನನ್ನು ಬರಮಾಡಿದ ನಿನ್ನ ದೇವರಾದ ಯೆಹೋವನು ನಾನೇ.’”
Copyright © Global Recordings Network. Used by permission.
ಪಾಠ - 2: ನಾಮಾನನಿಗೆ ಗುಣವಾಗುತ್ತದೆ
ಬೈಬಲ್ ವಾಚನ: 2 ಅರಸುಗಳು 5:13-16
1. ಕತೆಯನ್ನು ಕ್ರಮವಾಗಿ ಜೋಡಿಸಿ
a) ನಾಮಾನನು ಯೊರ್ದನಿನಲ್ಲಿ ಏಳು ಸಾರಿ ಸ್ನಾನ ಮಾಡಿದನು.
b) ನಾಮಾನನಿಗೆ ಕೋಪ ಬಂದು ಸ್ನಾನ ಮಾಡಲು ಒಪ್ಪಲಿಲ್ಲ.
c) ನಾಮಾನನ ಚರ್ಮ ಶುದ್ಧವಾಗಿ ಆರೋಗ್ಯವಾಯಿತು.
d) ಅವನ ಸೇವಕರು ಅವನನ್ನು ವಿಧೇಯನಾಗಲು ಒಪ್ಪಿಸಿದರು.
👉 ಸರಿಯಾದ ಕ್ರಮ:
ನಾಮಾನನಿಗೆ ಕೋಪ ಬಂದು ಸ್ನಾನ ಮಾಡಲು ಒಪ್ಪಲಿಲ್ಲ.
ಅವನ ಸೇವಕರು ಅವನನ್ನು ವಿಧೇಯನಾಗಲು ಒಪ್ಪಿಸಿದರು.
ನಾಮಾನನು ಯೊರ್ದನಿನಲ್ಲಿ ಏಳು ಸಾರಿ ಸ್ನಾನ ಮಾಡಿದನು.
ನಾಮಾನನ ಚರ್ಮ ಶುದ್ಧವಾಗಿ ಆರೋಗ್ಯವಾಯಿತು.
2. ವಾಕ್ಯಗಳನ್ನು ಪೂರ್ಣಗೊಳಿಸಿ
ಪದ ಪೆಟ್ಟಿಗೆ: ಕೊಡುಗೆ, ದೇವರು, ದೀನ
ನಾಮಾನನು ____________ ವ್ಯಕ್ತಿಯಾಗಿ ಪ್ರವಾದಿಯ ಮಾತಿಗೆ ವಿಧೇಯನಾದನು. __________ 👉 ದೀನ
ಗುಣವಾದದ್ದು ದೇವರು ಕೊಟ್ಟ ಉಚಿತ ____________. __________ 👉 ಕೊಡುಗೆ
ನಾಮಾನನು ಆರಾಧಿಸಲು ಬಯಸಿದ ನಿಜವಾದ ಒಬ್ಬನೇ ____________. __________ 👉 ದೇವರು
3. ಸರಿಯೋ ತಪ್ಪೋ?
ಸರಿ ಅಥವಾ ತಪ್ಪು ಎಂದು ಬರೆಯಿರಿ:
ದೇವರಿಗಿಂತ ನನ್ನ ಜಾಣತನದಲ್ಲಿ ಹೆಚ್ಚು ನಂಬಿಕೆ ಇಡುವುದು. ( ___ ) 👉 ತಪ್ಪು
ದೇವರ ಕೊಡುಗೆಗಳಿಗಾಗಿ ಆತನಿಗೆ ಉಪಕಾರ ಹೇಳುವುದು. ( ___ ) 👉 ಸರಿ
ದೇವರ ಆಶೀರ್ವಾದಗಳಿಗೆ ನಾನು ಹಣ ಕೊಡಬಹುದು ಎಂದು ಭಾವಿಸುವುದು. ( ___ ) 👉 ತಪ್ಪು
4. ಚರ್ಚೆಯ ಪ್ರಶ್ನೆಗಳು
ನಾಮಾನನು ಮನಸ್ಸು ಬದಲಾಯಿಸಲು ಯಾರು ಸಹಾಯ ಮಾಡಿದರು?
ಮಾದರಿ ಉತ್ತರ: ಅವನ ಬುದ್ಧಿವಂತ ಸೇವಕರು.
ಎಲೀಷನು ನಾಮಾನನ ಕಾಣಿಕೆಗಳನ್ನು ಏಕೆ ಸ್ವೀಕರಿಸಲಿಲ್ಲ?
ಮಾದರಿ ಉತ್ತರ: ಗುಣವು ದೇವರ ಉಚಿತ ಕೊಡುಗೆಯಾಗಿತ್ತು; ಅದನ್ನು ಮಾಡಿದ್ದು ದೇವರ ಶಕ್ತಿ, ಎಲೀಷನದಲ್ಲ.
ಜನರು ದೇವರ ಬದಲು ಯಾವುದರಲ್ಲಿ ನಂಬಿಕೆ ಇಡುತ್ತಾರೆ?
ಮಾದರಿ ಉತ್ತರ: ಹಣ, ಆಸ್ತಿ, ಒಳ್ಳೆಯ ಕೆಲಸ ಅಥವಾ ಒಳ್ಳೆಯ ವಿದ್ಯಾಭ್ಯಾಸ.
5. ಕಂಠಪಾಠ ವಚನ:
ವಿಮೋಚನಕಾಂಡ 20:1-2 — “ಆಗ ದೇವರು ಈ ಎಲ್ಲಾ ಮಾತುಗಳನ್ನು ಹೇಳಿದನು: “ದಾಸತ್ವದ ಮನೆಯಾದ ಐಗುಪ್ತದೇಶದೊಳಗಿಂದ ನಿನ್ನನ್ನು ಬರಮಾಡಿದ ನಿನ್ನ ದೇವರಾದ ಯೆಹೋವನು ನಾನೇ.””
ಯಾಕೋಬ 4:10 — “ಕರ್ತನ ಮುಂದೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ; ಆತನು ನಿಮ್ಮನ್ನು ಹೆಚ್ಚಿಸುವನು.”
6. ಚಿತ್ರಕ್ಕೆ ಬಣ್ಣ ಹಚ್ಚಿರಿ:
If the workbook does not display on your device, use the Download PDF button above.
ಕರಕುಶಲ 1: ಏಳು ಮುಳುಗು ಲೆಕ್ಕ
ಬೇಕಾದ ಸಾಮಗ್ರಿಗಳು: ಕಾಗದ, ಕ್ರೇಯಾನ್, ಕತ್ತರಿ
ವಿಧಾನ:
ಸಾಲಾಗಿ ಏಳು ಚಿಕ್ಕ ಅಲೆಗಳನ್ನು ಬಿಡಿಸಿ.
ಅವುಗಳಿಗೆ ನೀಲಿ ಬಣ್ಣ ಹಚ್ಚಿ.
ಅಲೆಗಳ ಮೇಲೆ 1 ರಿಂದ 7 ರವರೆಗೆ ಸಂಖ್ಯೆ ಬರೆಯಿರಿ.
ಬರೆಯಿರಿ: “ದೇವರು ನಾಮಾನನನ್ನು ಗುಣಪಡಿಸಿದನು.”
ಪಾಠದ ಮುಖ್ಯ ಅಂಶ: ನಾಮಾನನು ದೇವರ ಮಾತಿಗೆ ವಿಧೇಯನಾದನು, ದೇವರು ಅವನನ್ನು ಗುಣಪಡಿಸಿದನು.
ಕರಕುಶಲ 2: ಉಪಕಾರದ ಕಾರ್ಡ್
ಬೇಕಾದ ಸಾಮಗ್ರಿಗಳು: ಮಡಚಿದ ಕಾಗದ, ಕ್ರೇಯಾನ್
ವಿಧಾನ:
ಮುಂಭಾಗದಲ್ಲಿ ಆರೋಗ್ಯವಾದ ಚರ್ಮದಿಂದ ಸಂತೋಷವಾಗಿರುವ ನಾಮಾನನನ್ನು ಬಿಡಿಸಿ.
ಒಳಗೆ ಬರೆಯಿರಿ: “ದೇವರೇ, ನಿನ್ನ ಕೊಡುಗೆಗಳಿಗಾಗಿ ಸ್ತೋತ್ರ.”
ಹೂವುಗಳಿಂದ ಅಲಂಕರಿಸಿ.
ಪಾಠದ ಮುಖ್ಯ ಅಂಶ: ದೇವರ ಕೊಡುಗೆಗಳು ಉಚಿತ; ನಾವು ಆತನಿಗೆ ಉಪಕಾರ ಹೇಳಬೇಕು.
ಆಟ 1: ಏಳು ಸಾರಿ ಸ್ನಾನ
ಆಡುವ ವಿಧಾನ:
ಮಕ್ಕಳು ನಿಂತು ಏಳು ಸಾರಿ ಸ್ನಾನ ಮಾಡುವಂತೆ ನಟಿಸುತ್ತಾ ಗಟ್ಟಿಯಾಗಿ ಎಣಿಸಲಿ.
ಏಳನೆಯ ಸಾರಿಯ ನಂತರ ಚಪ್ಪಾಳೆ ತಟ್ಟಿ “ದೇವರೇ, ಸ್ತೋತ್ರ!” ಎನ್ನಲಿ.
ಒಂದು ಮಗು ಮುಂದಾಳತ್ವ ವಹಿಸಿ ಪುನಃ ಮಾಡಲಿ.
ಪಾಠದ ಮುಖ್ಯ ಅಂಶ: ದೇವರಿಗೆ ವಿಧೇಯರಾಗುವುದು ಸಂತೋಷ ತರುತ್ತದೆ.
ಆಟ 2: ನಂಬಿಕೆಯ ಪ್ರಶ್ನೆ
ಆಡುವ ವಿಧಾನ:
ಹಣ, ಕೆಲಸ, ಪುಸ್ತಕ ಮತ್ತು ಪ್ರಾರ್ಥಿಸುವ ಮಗುವಿನ ಚಿತ್ರಗಳನ್ನು ತೋರಿಸಿ.
ನಾವು ಎಲ್ಲಕ್ಕಿಂತ ಹೆಚ್ಚು ಯಾವುದರಲ್ಲಿ ನಂಬಿಕೆ ಇಡಬೇಕು ಎಂದು ಕೇಳಿ.
ಎಲ್ಲರೂ ಪ್ರಾರ್ಥಿಸುವ ಮಗುವಿನ ಚಿತ್ರವನ್ನು ತೋರಿಸಲಿ.
ಪಾಠದ ಮುಖ್ಯ ಅಂಶ: ನಾವು ಎಲ್ಲಕ್ಕಿಂತ ಹೆಚ್ಚಾಗಿ ದೇವರಲ್ಲಿ ನಂಬಿಕೆ ಇಡುತ್ತೇವೆ.
